NSS Activities – 2025

NSS Activities – 2025

National Service Scheme, Tunga Mahavidyalaya

The National Service Scheme (NSS) is a Central Sector Scheme of the Government of India under the Ministry of Youth Affairs and Sports. It gives students the opportunity to take part in community service activities and programmes, with the aim of providing hands-on experience in serving society. The scheme was introduced in 1969.

This page records the activities conducted by the NSS units of Tunga Mahavidyalaya during 2025.

Back to NSS   NSS Activities – 2024

Activities in 2025

2 January 2025

Cleanliness Drive on the Banks of the Tunga

ದಿನಾಂಕ 02.01.2025ರಂದು ತೀರ್ಥಹಳ್ಳಿಯ ತುಂಗಾ ತೀರದ ಸುತ್ತ ಮುತ್ತ ಪ್ಲಾಸ್ಟಿಕ್, ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಲಾಯಿತು. ಪ್ರಥಮ B.A., B.Com., B.Sc., ಮತ್ತು BCAಯ NSS ವಿದ್ಯಾರ್ಥಿಗಳು, NSS ಅಧಿಕಾರಿಗಳಾದ ಶ್ರೀಯುತ ಮೋಹನ ಕುಮಾರ್, ಶ್ರೀಯುತ ನಂದನ್ ಎನ್. ಜಿ. ರವರು ಇದ್ದರು.

NSS volunteers cleaning the banks of the Tunga river, 2 January 2025 – photo 1NSS volunteers cleaning the banks of the Tunga river, 2 January 2025 – photo 2NSS volunteers cleaning the banks of the Tunga river, 2 January 2025 – photo 3NSS volunteers cleaning the banks of the Tunga river, 2 January 2025 – photo 4NSS volunteers cleaning the banks of the Tunga river, 2 January 2025 – photo 5NSS volunteers cleaning the banks of the Tunga river, 2 January 2025 – photo 6
13 February 2025

Legal Literacy and Legal Awareness Programme

ದಿನಾಂಕ 13-02-2025: ಕಾನೂನು ಸಾಕ್ಷರತೆ ಮತ್ತು ಕಾನೂನು ಅರಿವು ಕಾರ್ಯಕ್ರಮ – ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ, ಬೆಂಗಳೂರು, ಶಿವಮೊಗ್ಗ ಹಾಗೂ ತೀರ್ಥಹಳ್ಳಿ, ಗೌರವಾನ್ವಿತ ವಕೀಲರ ಸಂಘ ತೀರ್ಥಹಳ್ಳಿ, ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಒಂದು ಮತ್ತು ಎರಡು ಮತ್ತು Women Empowerment Cell.

ಉದ್ಘಾಟಕರಾಗಿ ಆಗಮಿಸಿದ ಶ್ರೀ ಸಂತೋಷ್ ಎಂ ಎಸ್, ಗೌರವಾನ್ವಿತ ನ್ಯಾಯಾಧೀಶರು. ಶ್ರೀಮತಿ ಕವಿತಾ ಎಂ ಡಿ, ಅಭಿಯೋಜಕರು ತೀರ್ಥಹಳ್ಳಿ, ತೀರ್ಥಹಳ್ಳಿ ವಕೀಲ ಸಂಘ, ವಕೀಲರ ಸಂಘದ ಅಧ್ಯಕ್ಷರಾದ ಹಾಗೂ ತುಂಗಾ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಎಂ ಎನ್ ರಮೇಶ್, ಕಾಲೇಜಿನ ಪ್ರಾಚಾರ್ಯರಾದ ಆರ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಯಶಸ್ವಿಗೊಳಿಸಿದರು. ಆಗಮಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

Legal Literacy and Legal Awareness Programme, 13 February 2025 – photo 1Legal Literacy and Legal Awareness Programme, 13 February 2025 – photo 2Legal Literacy and Legal Awareness Programme, 13 February 2025 – photo 3Legal Literacy and Legal Awareness Programme, 13 February 2025 – photo 4Legal Literacy and Legal Awareness Programme, 13 February 2025 – photo 5
9 – 15 March 2025

ಗಾಂಧಿ ತತ್ವ ಪ್ರಣೀತ ರಾಜ್ಯ ಮಟ್ಟದ ಯುವಜನ ಶಿಬಿರ

Gandhian Values State-Level Youth Camp, Harogolige, Thirthahalli

ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಕರ್ನಾಟಕ ಗಾಂಧಿಸ್ಮಾರಕ ನಿಧಿ, ಬೆಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಹಾರೋಗೊಳಿಗೆ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ “ಗಾಂಧಿ ತತ್ವ ಪ್ರಣೀತ ರಾಜ್ಯ ಮಟ್ಟದ ಯುವಜನ ಶಿಬಿರ” ಮತ್ತು ಗಾಂಧಿ ಅನುಯಾಯಿ, ಮಾಜಿ ಮುಖ್ಯಮಂತ್ರಿ ಶ್ರೀ ಕಡಿದಾಳ್ ಮಂಜಪ್ಪ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಶಿಬಿರವು 2025ರ ಮಾರ್ಚ್ 9 ರಿಂದ 15 ರವರೆಗೆ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೊಳಿಗೆ ಗ್ರಾಮದ ಕಡಿದಾಳ್ ಮಂಜಪ್ಪ ಸಭಾ ಭವನದಲ್ಲಿ ನಡೆಯಿತು.

ಶಿಬಿರದ ಮುಖ್ಯ ಉದ್ದೇಶಗಳು ಯುವಜನತೆಯಲ್ಲಿ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು, ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು ಮತ್ತು ಸಾಮಾಜಿಕ ಕಳಕಳಿಯನ್ನು ಮೂಡಿಸುವುದಾಗಿತ್ತು. ಜೊತೆಗೆ, ಗಾಂಧೀಜಿಯವರ ವಿಚಾರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಮತ್ತು ಪ್ರಸ್ತುತ ಸಮಾಜದಲ್ಲಿ ಅವುಗಳ ಪ್ರಸ್ತುತತೆಯನ್ನು ಎತ್ತಿ ತೋರಿಸುವುದು ಶಿಬಿರದ ಗುರಿಯಾಗಿತ್ತು.

ಶಿಬಿರದಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳು

  • ಉದ್ಘಾಟನಾ ಸಮಾರಂಭ
  • ಶ್ರೀ ಕಡಿದಾಳ್ ಮಂಜಪ್ಪ ಅವರ ಜೀವನ ಚರಿತ್ರೆಯ ಕುರಿತು ಉಪನ್ಯಾಸ (ಡಾ|| ಎಚ್ ಕೆ ಪಾಟೀಲ್ ಅವರಿಂದ)
  • ಯುವಜನತೆ ಮತ್ತು ಜೀವನ ಮೌಲ್ಯಗಳು, ಗಾಂಧಿ ಮತ್ತು ಯುವಜನತೆ, ನೈಸರ್ಗಿಕ ಕೃಷಿ, ಗ್ರಾಮ ಪುನರ್ನಿರ್ಮಾಣದಲ್ಲಿ ಯುವಕರ ಪಾತ್ರ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸಗಳು
  • ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
  • ಗುಂಪು ಚರ್ಚೆಗಳು
  • ಪರಿಸರ ಕಾಳಜಿಯ ಕುರಿತಾದ ಚಟುವಟಿಕೆಗಳು (ಗಿಡ ನೆಡುವ ಕಾರ್ಯಕ್ರಮ)
  • ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪತ್ರ ವಿತರಣೆ

ಶಿಬಿರದ ವರದಿ

ದಿನಾಂಕ 09.03.2025ರಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ವಾರಗಳ ಕಾಲ ಆಯೋಜನೆಗೊಳಿಸಿರುವ “ಗಾಂಧಿ ತತ್ವ ಪ್ರಣೀತ ರಾಜ್ಯ ಮಟ್ಟದ ಯುವಜನ ಶಿಬಿರ” ವನ್ನು ಸತ್ಯ ಪ್ರಾಮಾಣಿಕತೆಯ ಸಂತ, ಮಾಜಿ ಮುಖ್ಯಮಂತ್ರಿ ಶ್ರೀ ಕಡಿದಾಳ್ ಮಂಜಪ್ಪ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸುವುದರ ಮೂಲಕ ಕಡಿದಾಳು ಗ್ರಾಮದಲ್ಲಿ ಚಾಲನೆ ನೀಡಲಾಯಿತು.

ಶಿಬಿರದಲ್ಲಿ ಭಾಗವಹಿಸಿದ ಗಣ್ಯ ವ್ಯಕ್ತಿಗಳು

  • ಡಾ|| ಎಚ್ ಕೆ ಪಾಟೀಲ್
  • ಶ್ರೀ ಮಧು ಬಂಗಾರಪ್ಪ
  • ನಾಡೋಜ ಡಾ|| ವೂಡೇ ಪಿ ಕೃಷ್ಣ
  • ಶ್ರೀ ಆರಗ ಜ್ಞಾನೇಂದ್ರ
  • ಶ್ರೀ ಕಿಮ್ಮನೆ ರತ್ನಾಕರ
  • ಡಾ|| ಪ್ರತಾಪ್ ಲಿಂಗಯ್ಯ
  • ಪ್ರೊ. ಜೆ.ಎಲ್ ಪದ್ಮನಾಭ

ಮತ್ತು ಇತರ ಸಂಪನ್ಮೂಲ ವ್ಯಕ್ತಿಗಳು ಮತ್ತು ಗಣ್ಯರು.