About National Service Scheme (NSS)
The National Service Scheme (NSS) is a Central Sector Scheme of Government of India, Ministry of Youth Affairs & Sports. It provides opportunity to the student youth of 11th & 12th Class of schools at +2 Board level and student youth of Technical Institution, Graduate & Post Graduate at colleges and University level of India to take part in various government led community service activities & programmes. The sole aim of the NSS is to provide hands on experience to young students in delivering community service. NSS scheme was introduced in 1969.






ದಿನಾಂಕ 02.01.2025ರಂದು ತೀರ್ಥಹಳ್ಳಿಯ ತುಂಗಾ ತೀರದ ಸುತ್ತ ಮುತ್ತ ಪ್ಲಾಸ್ಟಿಕ್, ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಲಾಯಿತು.
ಪ್ರಥಮ B.A., B.Com., B.Sc., ಮತ್ತು BCAಯ NSS ವಿದ್ಯಾರ್ಥಿಗಳು, NSS ಅಧಿಕಾರಿಗಳಾದ ಶ್ರೀಯುತ ಮೋಹನ ಕುಮಾರ್, ಶ್ರೀಯುತ ನಂದನ್ ಎನ್. ಜಿ. ರವರು ಇದ್ದರು.





ದಿನಾಂಕ 13-02-2025:
ಕಾನೂನು ಸಾಕ್ಷರತೆ ಮತ್ತು ಕಾನೂನು ಅರಿವು ಕಾರ್ಯಕ್ರಮ
ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ, ಬೆಂಗಳೂರು, ಶಿವಮೊಗ್ಗ ಹಾಗೂ ತೀರ್ಥಹಳ್ಳಿ, ಗೌರವಾನ್ವಿತ ವಕೀಲರ ಸಂಘ ತೀರ್ಥಹಳ್ಳಿ, ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಒಂದು ಮತ್ತು ಎರಡು ಮತ್ತು Women Empowerment Cell.
ಉದ್ಘಾಟಕರಾಗಿ ಆಗಮಿಸಿದ ಶ್ರೀ ಸಂತೋಷ್ ಎಂ ಎಸ್, ಗೌರವಾನ್ವಿತ ನ್ಯಾಯಾಧೀಶರು. ಶ್ರೀಮತಿ ಕವಿತಾ ಎಂ ಡಿ, ಅಭಿಯೋಜಕರು ತೀರ್ಥಹಳ್ಳಿ, ತೀರ್ಥಹಳ್ಳಿ ವಕೀಲ ಸಂಘ, ವಕೀಲರ ಸಂಘದ ಅಧ್ಯಕ್ಷರಾದ ಹಾಗೂ ತುಂಗಾ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಎಂ ಎನ್ ರಮೇಶ್, ಕಾಲೇಜಿನ ಪ್ರಾಚಾರ್ಯರಾದ ಆರ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಯಶಸ್ವಿಗೊಳಿಸಿದರು.
ಆಗಮಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು
ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಕರ್ನಾಟಕ ಗಾಂಧಿಸ್ಮಾರಕ ನಿಧಿ, ಬೆಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಹಾರೋಗೊಳಿಗೆ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ “ಗಾಂಧಿ ತತ್ವ ಪ್ರಣೀತ ರಾಜ್ಯ ಮಟ್ಟದ ಯುವಜನ ಶಿಬಿರ” ಮತ್ತು ಗಾಂಧಿ ಅನುಯಾಯಿ, ಮಾಜಿ ಮುಖ್ಯಮಂತ್ರಿ ಶ್ರೀ ಕಡಿದಾಳ್ ಮಂಜಪ್ಪ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಶಿಬಿರವು 2025ರ ಮಾರ್ಚ್ 9 ರಿಂದ 15 ರವರೆಗೆ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೊಳಿಗೆ ಗ್ರಾಮದ ಕಡಿದಾಳ್ ಮಂಜಪ್ಪ ಸಭಾ ಭವನದಲ್ಲಿ ನಡೆಯಿತು.
ಶಿಬಿರದ ಮುಖ್ಯ ಉದ್ದೇಶಗಳು ಯುವಜನತೆಯಲ್ಲಿ ಗಾಂಧೀಜಿಯವರ ತತ್ವಗಳನ್ನು ಬಿತ್ತುವುದು, ಅವರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು ಮತ್ತು ಸಾಮಾಜಿಕ ಕಳಕಳಿಯನ್ನು ಮೂಡಿಸುವುದಾಗಿತ್ತು. ಜೊತೆಗೆ, ಗಾಂಧೀಜಿಯವರ ವಿಚಾರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಮತ್ತು ಪ್ರಸ್ತುತ ಸಮಾಜದಲ್ಲಿ ಅವುಗಳ ಪ್ರಸ್ತುತತೆಯನ್ನು ಎತ್ತಿ ತೋರಿಸುವುದು ಶಿಬಿರದ ಗುರಿಯಾಗಿತ್ತು.
ಶಿಬಿರದಲ್ಲಿ ನಡೆದ ಪ್ರಮುಖ ಕಾರ್ಯಕ್ರಮಗಳೆಂದರೆ:
- ಉದ್ಘಾಟನಾ ಸಮಾರಂಭ
- ಶ್ರೀ ಕಡಿದಾಳ್ ಮಂಜಪ್ಪ ಅವರ ಜೀವನ ಚರಿತ್ರೆಯ ಕುರಿತು ಉಪನ್ಯಾಸ (ಡಾ|| ಎಚ್ ಕೆ ಪಾಟೀಲ್ ಅವರಿಂದ)
- ಯುವಜನತೆ ಮತ್ತು ಜೀವನ ಮೌಲ್ಯಗಳು, ಗಾಂಧಿ ಮತ್ತು ಯುವಜನತೆ, ನೈಸರ್ಗಿಕ ಕೃಷಿ, ಗ್ರಾಮ ಪುನರ್ನಿರ್ಮಾಣದಲ್ಲಿ ಯುವಕರ ಪಾತ್ರ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸಗಳು
- ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
- ಗುಂಪು ಚರ್ಚೆಗಳು
- ಪರಿಸರ ಕಾಳಜಿಯ ಕುರಿತಾದ ಚಟುವಟಿಕೆಗಳು (ಗಿಡ ನೆಡುವ ಕಾರ್ಯಕ್ರಮ)
- ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪತ್ರ ವಿತರಣೆ
ಗಾಂಧಿ ತತ್ವ ಪ್ರಣೀತ ರಾಜ್ಯ ಮಟ್ಟದ ಯುವಜನ ಶಿಬಿರ - ವರದಿ
ದಿನಾಂಕ 09.03.2025ರಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟೀಯ ಸೇವಾ ಯೋಜನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ವಾರಗಳ ಕಾಲ ಆಯೋಜನೆಗೊಳಿಸಿರುವ “ಗಾಂಧಿ ತತ್ವ ಪ್ರಣೀತ ರಾಜ್ಯ ಮಟ್ಟದ ಯುವಜನ ಶಿಬಿರ” ವನ್ನು ಸತ್ಯ ಪ್ರಾಮಾಣಿಕತೆಯ ಸಂತ, ಮಾಜಿ ಮುಖ್ಯಮಂತ್ರಿ ಶ್ರೀ ಕಡಿದಾಳ್ ಮಂಜಪ್ಪ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸುದರ ಮೂಲಕ ಕಡಿದಾಳು ಗ್ರಾಮದಲ್ಲಿ ಚಾಲನೆ ನೀಡಲಾಯಿತು
ಶಿಬಿರದಲ್ಲಿ ಭಾಗವಹಿಸಿದ ಗಣ್ಯ ವ್ಯಕ್ತಿಗಳು:
- ಡಾ|| ಎಚ್ ಕೆ ಪಾಟೀಲ್
- ಶ್ರೀ ಮಧು ಬಂಗಾರಪ್ಪ
- ನಾಡೋಜ ಡಾ॥ ವೂಡೇ ಪಿ ಕೃಷ್ಣ
- ಶ್ರೀ ಆರಗ ಜ್ಞಾನೇಂದ್ರ
- ಶ್ರೀ ಕಿಮ್ಮನೆ ರತ್ನಾಕರ
- ಡಾ|| ಪ್ರತಾಪ್ ಲಿಂಗಯ್ಯ
- ಪ್ರೊ. ಜೆ.ಎಲ್ ಪದ್ಮನಾಭ
ಮತ್ತು ಇತರ ಸಂಪನ್ಮೂಲ ವ್ಯಕ್ತಿಗಳು ಮತ್ತು ಗಣ್ಯರು.