Loading Events

« All Events

  • This event has passed.

ಉದ್ಯೋಗ ಮತ್ತು ವೃತ್ತಿಪರ ಮಾರ್ಗದರ್ಶನ – ಒಂದು ದಿನದ ಕಾರ್ಯಗಾರ

June 15, 2024 @ 11:00 am 5:00 pm UTC+0

ಉದ್ಯೋಗ ಮತ್ತು ವೃತ್ತಿಪರ ಮಾರ್ಗದರ್ಶನ – ಒಂದು ದಿನದ ಕಾರ್ಯಗಾರ

ಸ್ಥಳ:ಕಾಲೇಜಿನ ಸಭಾಂಗಣ, ತುಂಗಾ ಮಹಾವಿದ್ಯಾಲಯ, ಆನಂದಗಿರಿ, ತೀರ್ಥಹಳ್ಳಿ.
ದಿನಾಂಕ:15/6/2024 ರಂದು ಬೆಳಿಗ್ಗೆ 11:00
ಆಯೋಜಕರು:ಪ್ಲೇಸ್ಮೆಂಟ್ ಅಂಡ್ ಕರಿಯರ್ ಗೈಡೆನ್ಸ್ ಸಮಿತಿ, ಜೆ ಸಿ ಸಂಸ್ಥೆ, ತೀರ್ಥಹಳ್ಳಿ
ಸಂಪನ್ಮೂಲ ವ್ಯಕ್ತಿ:ಪ್ರಮೋದ್ ಶಾಸ್ತ್ರಿ, ಜೋನ್ ಟ್ರೈನರ್, ಜೆ ಸಿ ಸಂಸ್ಥೆ.

     ತುಂಗಾ ಮಹಾವಿದ್ಯಾಲಯ, ಆನಂದಗಿರಿ, ತೀರ್ಥಹಳ್ಳಿ, ಕಾಲೇಜಿನ ಸಭಾಂಗಣದಲ್ಲಿ ದಿನಾಂಕ:15/6/2024 ರಂದು ಬೆಳಿಗ್ಗೆ 11:00 ಗಂಟೆಗೆ ಪ್ಲೇಸ್ಮೆಂಟ್ ಅಂಡ್ ಕರಿಯರ್ ಗೈಡೆನ್ಸ್ ಸಮಿತಿಯಿಂದ “ಉದ್ಯೋಗ ಮತ್ತು ವೃತ್ತಿಪರ ಮಾರ್ಗದರ್ಶನ”ವನ್ನು ಜೆ ಸಿ ಸಂಸ್ಥೆ, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಯಾದ ಜೆ ಸಿ ಸಂಸ್ಥೆಯ ಜೋನ್ ಟ್ರೈನರ್ ಅದ ಪ್ರಮೋದ್ ಶಾಸ್ತ್ರಿರವರು ವಿದ್ಯಾರ್ಥಿಗಳನ್ನು ಕುರಿತು ಭವಿಷ್ಯದಲ್ಲಿ ಉದ್ಯೋಗವನ್ನು ಹೇಗೆ ಸೃಷ್ಟಿಸಿಕೊಳ್ಳಬೇಕು ಹಾಗೂ ಉದ್ಯೋಗ ಕೌಶಲ್ಯದ ಸಮಯ ಮತ್ತು ಒತ್ತಡವನ್ನು ಹೇಗೆ ನಿರ್ವಹಿಸಬೇಕು, ಉದ್ಯೋಗದ ಸಂದರ್ಶನ ಎಂಬ ವಿಷಯಗಳ ಕುರಿತು ಮುಕ್ತವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು.

     ಈ ಕಾರ್ಯಗಾರದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪಟ್ಟಮಕ್ಕಿ ಮಹಾಬಲೇಶ್, ಕಾರ್ಯದರ್ಶಿಗಳಾದ ಡಾನ್ ರಾಮಣ್ಣ ಶೆಟ್ಟಿ, ಪ್ರಾಂಶುಪಾಲರಾದ ಡಾ ಕುಮಾರಸ್ವಾಮಿ, ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕರಾದ ಡಾ ನಾಗರಾಜ್ ಎಂ, ಪ್ಲೇಸ್ಮೆಂಟ್ ಅಂಡ್ ಕರಿಯರ್ ಗೈಡೆನ್ಸ್ ಸಮಿತಿಯ ಸಂಚಾಲಕರಾದ ಡಾ ದೀಪ ಎಲ್ , ಜೇಸಿ ಸಂಸ್ಥೆಯ, ಅಧ್ಯಕ್ಷರಾದ ಹರೀಶ ಸರ್ಜಾ, ಉಪಾಧ್ಯಕ್ಷರಾದ ವಸುಧಾರವರು ಹಾಗೂ ಈ ಕಾರ್ಯಗಾರವನ್ನು ನಿರೂಪಿಸಿದ ಮೋಹನ್ ಕುಮಾರ್ ಬಿ ಸಿ ಉಪಸ್ಥಿತಿಯಲ್ಲಿದ್ದರು.

– Dr. Deepa L
Coordinator,
Placement and Career Guidance Cell
(ಒಂದು ದಿನದ ಕಾರ್ಯಗಾರದ ಕುರಿತು ಮಾಧ್ಯಮದ ವರದಿ)

ಪ್ಲೇಸ್ಮೆಂಟ್ ಅಂಡ್ ಕರಿಯರ್ ಗೈಡೆನ್ಸ್ ಸಮಿತಿ, ಜೆ ಸಿ ಸಂಸ್ಥೆ, ತೀರ್ಥಹಳ್ಳಿ

ಕಾಲೇಜಿನ ಸಭಾಂಗಣ, ತುಂಗಾ ಮಹಾವಿದ್ಯಾಲಯ, ಆನಂದಗಿರಿ, ತೀರ್ಥಹಳ್ಳಿ.

Tunga Mahavidyalaya, Anandagiri
Thirthahalli, Karnataka 577432 India
+ Google Map
View Venue Website